ಸ್ವಾತಂತ್ರ್ಯ ಭಾರತದಲ್ಲಿ ೭೧ ವಸಂತಗಳನ್ನು ಕಳೆದ ಜನತೆಗೆ ೭೨ನೇ ಸ್ವತಂತ್ರ ದಿನದ ಶುಭಾಶಯಗಳು. ಇಂದು ನಾಗರ ಪಂಚಮಿ ಹಬ್ಬವೂ ಇರುವುದರಿಂದ ಶೀರ್ಷಿಕೆ ಸ್ವಲ್ಪ ಬದಲಾಗಿದೆ, ಎಂದಿನಂತೆ.
ಬ್ರಿಟಿಷರಿಂದ ಮಾತ್ರ ಸಿಕ್ಕ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಎಂಬ ಸಂದೇಶ ಕೆಲವು ಬಂಧುಮಿತ್ರರಿಂದ ಬಂದು ಇನ್ನೂ ಯಾವುದರಿಂದ ಸ್ವಾತಂತ್ರ್ಯ ಬೇಕು / ಬರಬೇಕು ಎಂಬ ಚಿಂತನೆ ತಂದೊಡ್ಡಿತು. ಸ್ವಾತಂತ್ರ್ಯಪೂರ್ವ ಭಾರತದ ಅರಿವಿದ್ದರೆ ಅಲ್ಲವೇ ಸ್ವತಂತ್ರ್ಯದ ಅರ್ಥ ಸರಿಯಾಗಿ ಆಗುವುದು !? ನಾವು ಕಲಿಸುತ್ತಿರುವುದು / ಕಲಿತಿರುವುದು / ಕಲಿಯುವುದೂ ಕೆಲವು ವಾದಗಳಿಂದ ಮಾರ್ಪಾಡಿಗೆ ಒಳಗಾದ ಇತಿಹಾಸ. ನಮಗೆ ಗೊತ್ತಿರುವ ಇತಿಹಾಸದಲ್ಲಿ ಮಹಾತ್ಮಗಾಂಧಿ, ಅಂಬೇಡ್ಕರ್, ನೆಹರು ಮತ್ತು ಅವರ ವಂಶಾವಳಿಗೆ ಮಾತ್ರ ಮಹತ್ವ. ಉಳಿದವರೆಲ್ಲಾ ತೆರೆಯ ಮರೆಗೆ - ನೇತಾಜಿ, ಚಂದ್ರಶೇಖರ್ ಆಜಾದ್, ಬಿಪಿನ್ ಚಂದ್ರಪಾಲ್, ಲಾಲ್ ಬಹದ್ದೂರ ಶಾಸ್ತ್ರಿ, ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮುಸ್ಲಿಂ ರಾಜರೆಲ್ಲಾ ವೀರರೇ - ಧರ್ಮಾತೀತ ರಾಜ್ಯಾಡಳಿತ ನಡೆಸಿದವರೇ ಆಗಿರುತ್ತಾರೆ. ಅವರು ಆಳ್ವಿಕೆ ನಡೆಸುತ್ತಿರುವುದು ಹಿಂದೂ ದೇಶ; ಮುಖ್ಯವಾದ ಹುದ್ದೆಗಳೆಲ್ಲಾ ಅವರ ಧರ್ಮದವರಿಗೆ. ಮತಾಂತರಕ್ಕೆ ಅವರು ಯಾವತ್ತೂ ಸಿದ್ಧ, ಆದರೂ ಅವರ ಆಡಳಿತ ಸರ್ವಧರ್ಮವನ್ನೂ ಸಮನಾಗಿ ಕಾಣುತ್ತಿದ್ದರೆಂದೇ ಚಿತ್ರಿತವಾಗಿರುತ್ತದೆ. ಈ ಕಾರಣದಿಂದಲೇ ಟಿಪ್ಪು ಸಹ ಸ್ವತಂತ್ರ್ಯ ವೀರನಂತೆ ಕಾಣುತ್ತಾನೆ.
ಇತಿಹಾಸವೆಂದರೆ ಕೇವಲ ನಾಯಕರದ್ದು ಮಾತ್ರವೇ? ಜನಸಾಮಾನ್ಯರ ಪಾತ್ರಕ್ಕೆ ಬೆಲೆ ಇಲ್ಲವೇ ? ಇತಿಹಾಸವನ್ನು ಮರುಸೃಷ್ಟಿ ಮಾಡುವ ಬಗ್ಗೆ ಒಂದು ಪ್ರಯತ್ನ ರಷ್ಯಾದಲ್ಲಿ ಆಗಿತ್ತು. ಇದರಲ್ಲಿ ಅಂದಿನ ನಾಯಕರೆಲ್ಲಾ ಮೊಬೈಲ್ ಉಪಯೋಗಿಸುತ್ತಿದ್ದರೆ, ಜನಸಾಮಾನ್ಯರೂ ಅವರೊಂದಿಗೆ ಸಮೂಹ ಮಾಧ್ಯಮಗಳ ಮೂಲಕ ಸಂಪರ್ಕದಲ್ಲಿದ್ದಿದ್ದರೆ ಏನಾಗುತ್ತಿತ್ತು ಎಂಬ ಬಗ್ಗೆ ಒಳ್ಳೆಯ TED ವೀಡಿಯೋ ಇಲ್ಲಿದೆ.
ಜನಮಾನಸದಲ್ಲಿ ಸ್ವಾತಂತ್ರ್ಯದ ವ್ಯಾಖ್ಯೆ ಬದಲಾಗಿರುವುದನ್ನು ಗಮನಿಸಬಹುದು.
ಯುವಪೀಳಿಗೆಃ
ಹತ್ತನೇ ತರಗತಿಗೂ ಮುನ್ನ ಮೊಬೈಲ್ ಬೇಕು. ಎಲ್ಲಾ ಸೋಶಿಯಲ್ ಮೀಡಿಯಾದಲ್ಲೇ ಹಾಕ್ತೀವಿ - ಜನ್ಮದಿನವಾದರೂ ಸರಿ, ಶ್ರಾದ್ಧವಾದರೂ ಸರಿ. ಎಲ್ಲರೂ ಏನು ಮಾಡುತ್ತಾರೋ ಅದನ್ನೇ ನಾವು ಮಾಡಬೇಕು, ಅದಕ್ಕೆ ಪೋಷಕರ ಅನುಮತಿ ಬೇಕು. ಅನುಮತಿ ಇಲ್ಲವಾದರೆ ಸ್ವಾತಂತ್ರ್ಯವಿಲ್ಲ ಎಂದರ್ಥ ಅಷ್ಟೇ. ಸುಲಭದ ಉತ್ತರ.

ಮಧ್ಯವಯಸ್ಕರುಃ
ಮಕ್ಕಳು ಉದ್ಯೋಗ ಸಿಗೋವರೆಗೂ ಓದುತ್ತಲೇ ಇರಬೇಕು. ನಾವು ಹೇಳಿದಂತೆಯೇ ಕೇಳಬೇಕು. ನಾವು ಹೇಳಿದ್ದೇ ಓದಬೇಕು. ೯೫+ ಸ್ಕೋರ್ ಮಾಡಲೇಬೇಕು; ಇಲ್ಲವೆಂದರೆ ಪ್ರತಿಷ್ಟೆಯ ಪ್ರಶ್ನೆ. ಅದಕ್ಕಾಗಿ ಏನು ಬೇಕಾದರೂ ಕೊಡಿಸ್ತೀವಿ. ಈಗೀಗ ಚಿಕ್ಕ ಮಕ್ಕಳು ಊಟ ಮಾಡೋಕೂ ಲಂಚ ! ಅನ್ನ ತಿನ್ನಬೇಕೆಂದರೆ ತಿಂದಾದ ಮೇಲೆ ಚಾಕೋಲೇಟ್ ಗ್ಯಾರಂಟಿ ಇರಬೇಕು.

ಹಿರಿಜೀವಗಳುಃ
ನಮ್ಮ ಕಾಲದಲ್ಲಿ ಹಿಂಗಿರಲಿಲ್ಲಪ್ಪ. ಈಗಿನವರು ನಾವು ಹೇಳಿದ ಮಾತೇ ಕೇಳೋಲ್ಲ. ಈಗಿನ ಮಕ್ಕಳು ಅವರ ಹಿಡಿತದಲ್ಲಿದ್ದಾಗ ಏನು ಹೇಳಬೇಕೋ ಅದನ್ನು ಹೇಳಿರಲೇ ಇಲ್ಲ. ಈಗ ಹಳಹಳಿ. ಪಾಪ, ಅವರೇ ಮರೆತುಬಿಟ್ಟಿದ್ದಾರೆ.
ನಮ್ಮ ಕಾಲದಲ್ಲಿ ಹಿಂಗಿರಲಿಲ್ಲಪ್ಪ. ಈಗಿನವರು ನಾವು ಹೇಳಿದ ಮಾತೇ ಕೇಳೋಲ್ಲ. ಈಗಿನ ಮಕ್ಕಳು ಅವರ ಹಿಡಿತದಲ್ಲಿದ್ದಾಗ ಏನು ಹೇಳಬೇಕೋ ಅದನ್ನು ಹೇಳಿರಲೇ ಇಲ್ಲ. ಈಗ ಹಳಹಳಿ. ಪಾಪ, ಅವರೇ ಮರೆತುಬಿಟ್ಟಿದ್ದಾರೆ.
ಈ ಮೂರೂ ಪೀಳಿಗೆಯ ಜನ ಒಪ್ಪಬಹುದಾದ ಮಾನದಂಡಗಳೇ ಸ್ವಾತಂತ್ರ್ಯದ ಲಕ್ಷಣಗಳು. ಅವುಗಳ ಗೆರೆ ದಾಟಿದರೆ ಸ್ವೇಚ್ಚೆ. ಈಗ ಹೇಳಿ, ಸ್ವಾತಂತ್ರವೆಂದರೆ ಏನು ? ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸುವುದು /ಎಲ್ಲರೂ ಒಪ್ಪಬಲ್ಲ ವಿಧಿವಿಧಾನಗಳು ರೂಪಿಸುವುದು ಹಾವಿನೊಂದಿಗೆ ಸರಸವೇ.
ಅಬ್ಬಾ.. ನನ್ನ ಶೀರ್ಷಿಕೆಗೆ ಸರಿಯಾದ ಅರ್ಥಬಂತು
ಎಲ್ಲರೂ ಒಪ್ಪಬಲ್ಲ / ಬಯಸುವ ಕೆಲವು ಸ್ವಾತಂತ್ರ್ಯಗಳು ನಮಗೆಲ್ಲಾ ಗೊತ್ತಿದೆ.
ಬದುಕುವ ಸ್ವಾತಂತ್ರ್ಯ - ಯಾವ ವಿಷಯಗಳೂ ಮೂಲಭೂತ ಹಕ್ಕು / ಕರ್ತವ್ಯಗಳಿಗೆ ತೊಂದರೆ ಕೊಡಬಾರದು
ಧಾರ್ಮಿಕ ಸ್ವಾತಂತ್ರ್ಯ - ಇದು ಸೂಕ್ಷ್ಮ ವಿಷಯ. ಈ ಸ್ವಾತಂತ್ರ್ಯ ಕೊಟ್ಟಿದ್ದರ ಪರಿಣಾಮವೇ ಮತಾಂತರ / ಧರ್ಮಾಂತರಗಳಿಗೆ ಮೂಲ. ಆದರೂ ಇದು ಇರಬೇಕು.
ವಾಕ್ ಸ್ವಾತಂತ್ರ್ಯ - ಬೇಕೆಂದಾಗ walk ಹೋಗೋದಲ್ಲ, ಅನಿಸಿಕೆಗಳನ್ನು ಸ್ಪಷ್ಟವಾಗಿ ಪ್ರಚುರಪಡಿಸುವ ಸ್ವಾತಂತ್ರ್ಯ

ನನ್ನ ಪ್ರಕಾರ ಸ್ವಾತಂತ್ರ್ಯ ಎಂದರೆ
ಸ್ವಂತಿಕೆ / ತನ್ನತನ ಈ ಪದಗಳೆಲ್ಲಾ ಡಿಕ್ಷನರಿಯಲ್ಲೇ ಉಳಿದುಬಿಟ್ಟಿವೆ. ಸ್ವಾತಂತ್ರ್ಯ - ಸ್ವೇಚ್ಚೆ , ಸಾಧ್ಯ - ಅಸಾಧ್ಯ, ಒಳ್ಳೆಯದು - ಕೆಟ್ಟದ್ದು , ಸರಿ - ತಪ್ಪು ಎಲ್ಲವನ್ನೂ ಬೆರ್ಪಡಿಸುವ ಸಣ್ಣ ಗೆರೆಯೇ ವಿವೇಚನೆ. ಪ್ರತೀ ವ್ಯಕ್ತಿಯೂ ತನ್ನ ವ್ಯಕ್ತಿತ್ವವನ್ನು / ಜೀವನವನ್ನು ರೂಪಿಸಿಕೊಳ್ಳಲು ಬೇಕಾದ ನಿರ್ದಾರಗಳನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ವಿವೇಚನಾಪೂರ್ವಕವಾಗಿ ತೆಗೆದುಕೊಳ್ಳಬೇಕು. ಸಮಾಲೋಚನೆ ಮಾಡಬಹುದು, ಆದರೆ ಆ ನಿರ್ಧಾರಗಳ ಬದ್ಧತೆ ಅವರಿಗೇ ಬಿಟ್ಟಿದ್ದು.
ಸ್ವಾತಂತ್ರ್ಯ ದಿನದ ಶುಭಾಶಯಗಳು. ಸ್ವಾತಂತ್ರ್ಯದಿನವೆಂದರೆ ರಜಾದಿನ ಅಷ್ಟೇ ಅಲ್ಲ !
ಒಂದು ವರ್ಷದ ನಂತರ ಬ್ಲಾಗಲ್ಲಿ ಗೀಚುತ್ತಿದ್ದೇನೆ. ಸದ್ಯಕ್ಕೆ ಇಷ್ಟು ಸಾಕು.
ಒಂದೆರಡು ಒಳ್ಳೆಯ ವೀಡಿಯೋಗಳೊಂದಿಗೆ,
ಧನ್ಯವಾದಗಳು
1. ನವಭಾರತದ ನಿರ್ಮಾತೃಗಳು - ನಾವು ಮರೆತ ಮುಖಗಳು
2. ರಸ್ತೆಗಳು ಅಪ್ಪನ ಆಸ್ತಿಯಲ್ಲ - ಅಕ್ಷಯ್ ಕುಮಾರ್ ಬರಬೇಕು ನಮಗೆ ಇವೆಲ್ಲಾ ಹೇಳೋಕೆ
3. ೧೬ ದೇಶಭಕ್ತಿ ಗೀತೆಗಳು - ಸಣ್ಣ ರೀಮಿಕ್ಸ್
1 comment:
Super article Harsha.
Post a Comment