ಕೂಡಿ ಬಾಳೋಣ ಎಂದ ಕೋಟಿಗೊಬ್ಬ ಮಹಾಪುರುಶ ಕಾಲದ ಮಲಯ ಮಾರುತಕ್ಕೆ ಸಿಕ್ಕಿದ್ದಾನೆ.
ವಂಶ ವೃಕ್ಶದಿ೦ದ ಬೆಳೆದ ಅಭಿಮಾನದ ಬಂಧನವನ್ನು ಜನನಾಯಕ ಸಾಮ್ರಾಟ್ ೨೦೧೦ರ ಸುಪ್ರಭಾತದ ಮೊದಲೇ ಜಿಮ್ಮಿಗಲ್ಲಿಗೆ ಏರಿಸಿದ ದೇವ ನನ್ನ ಶತ್ರುವೇ ತಾನೆ ?
ಸಿಂಹಾದ್ರಿಯ ಸಿಂಹ, ವೀರಾಧಿ ವೀರ, ಆಪ್ತ ರಕ್ಶಕ ಯಜಮಾನನ ಅಗಲಿಕೆ ಕನ್ನಡ ಸೂರ್ಯವಂಶದ ತುಂಬಿದಮನೆಗೆ ಟೈಂಬಾಂಬ್ ಅಲ್ಲವೆ ?
ಕನ್ನಡದ ದಿಗ್ಗಜರುಗಳಲ್ಲಿ ಒಬ್ಬರಾದ ಧಣಿ, ಸಿರಿವಂತ, ಆಪ್ತಮಿತ್ರ, ಸಾಹಸ ಸಿಂಹ ಇ೦ದಿನ ರಾಮಾಯಣ, ಸ೦ಘಶ೯ ಬೇಡ ಎ೦ದು ಯಮ ಕಿಂಕರನೊ೦ದಿಗೆ ನಿಶ್ಕಶ೯ ಆದದ್ದು ಯಾವಾಗ ?
ಮೋಜುಗಾರ ಸೊಗಸುಗಾರನಾದರೂ ಹೊಂಬಿಸಿಲು ಸಮಯದಲ್ಲಿ ಕತ೯ವ್ಯ ಎಂಬಂತೆ ಹೃದಯಗೀತೆ ಹಾಡುತ್ತಿದ್ದ ಹೃದಯವಂತ ಕುಂತೀಪುತ್ರ, ಕದಂಬ, ಜಯಸಿಂಹ ಆದನು ಹರಕೆಯ ಕುರಿ ವಿಧಿ ಎಂಬ ಹಂತಕನ ಸಂಚಿಗೆ.
ಈ ಬ೦ಧನದ ಜೀವನಚಕ್ರ ಮುಗಿಸಿ ಅಭಿಮಾನದ ಹಿಮಪಾತ ವಶ೯, ಪ್ರೀತಿಯ ಸ್ಪಶ೯ ನಿರಾಕರಿಸಿ ಹೊರಟ ಮಹಾಕ್ಶತ್ರಿಯ ಅಪ್ಪಾಜಿ ನಮ್ಮೆಲ್ಲರ ಮರೆಯದ ಮಾಣಿಕ್ಯ.
ಕರುಣಾಮಯಿ ಕರ್ಣ, ಕರ್ನಾಟಕ ಸುಪುತ್ರ, ಚಿತ್ರರಂಗದ ಕಥಾನಾಯಕನ ಲಾಲಿ ಇಲ್ಲದೆ ಮುಂದಿನ ಹಬ್ಬ, ದೀಪಾವಳಿಗಳು ಸಪ್ಪೆ ಎಂಬುದು ಸತ್ಯ ಜ್ಯೋತಿ.
No comments:
Post a Comment