Saturday, September 26, 2020

The Power of NO

 It is astonishing if I say telling 'I don't know' has some power. But it is true.

First of all when do we say 'No', in circumstances if we don't know the thing properly i.e., we are not aware of that thing. It is better to accept our mistake of 'unknown' than escaping by talking as if we know it. As number of Nos increase you will be opened for truth and knowledge. No man is perfect.

If I say 'No', that is the symbol of my openness for knowing that thing. Hence I gain more from saying 'No' than saying 'Yes, but not completely'. We can say No is directly proportional to Know. While we are kids most of things which were unknown became known because of our mindset of taking new things. 

If you say No' for the thing which you don't like to do you will be free from stress. But 'No' should be valid. It should not lead to lazyness or should not cause any harm to others. "It is better to harmless than replying badly". The 'No' will figure out your taste. The invalid unjustifiable No is the loss for thyself. 

There should not be repetition of 'No' for same thing once you have already used. That is one 'No' should give almost complete knowledge w.r.t that thing, and mind should not be filled up with junk information. Therefore we should take care for it. 

Increase No increase the Knowledge

Increase No decrease stress, free from unwanted. 


27-September-2002 

Tuesday, July 21, 2020

Plan to spread positivity for pandemic Corona

There is no stage called after-pandemic in near future. People need to live with corona (infected, recovered, impacted). So I am planning to create a website to spread this perspective. 
Website : LifeWithCorona.in 
Launch Date : 1st August 2020

Basic rule : 
a. No negative news and/or exaggerated numbers.
b. Personal identity will be revealed only after written consent.

Initial thoughts on website sections:
1. Experience sharing from recovered patients.
Article / News Paper report / Video / Audio. 
These needs to be segregated by language (English, Hindi and other regional languages)
2. Tested Negative but had symptoms
10 times of people undergo stress (mentally) test for Covid. The waiting time for result is dangerous period. On other hand, many people avoid to go for Covid test because of stigma. 
These people need some positive directions 
3. Experience sharing by Corona Warriors - Volunteers, health workers, police 
4. Showcase the work done by NGOs during lockdown 
5. Showcase the measures taken by each state to take control on Corona spread
6. Care : 
    a. Chat with counsellors
    b. Call : people who are ready to share their experience over phone 
    c. Email support
    
7. Awareness: TBD

Social Media:
Facebook, Tweeter, Instagram, YouTube channel

Challenges:
The site needs update on daily basis
Getting the feedback and filtering - Many recovered patients just say everything is good without revealing the difficulties that they undergone. Need good interview technique to get proper stories

Data Collection:
Articles / reports from people : https://forms.gle/RJbENsUjQu5xAAR9A

Sunday, August 19, 2018

Help ... Help ... Help

Kerala is reeling from floods and torrential rain. Idukki, Palakkad, Wayanad, Kannur, Ernakulum, Malappuram, Kottayam & Pathanamthitta are reported to be the worst affected districts. A total of 367 casualties have been reported. More than 700,000 people have taken shelter in 5600+ relief camps.
Kodagu is in between 2 districts of Kerala - Kasaragodu and Kannur. Hence Kodagu too has been impacted severely. As this is surrounded by hills, more than floods it is impacted by land-slides. It has 41 relief camps for 5000+ people across the district. 40 bridges are damaged, 274 kilo-meters of road is impacted. Casualties count is increasing day by day. 50,000 people are impacted, some 4000 people are not traced.

Help is requested for Kerala and Kodagu. Response is extremely good. Relief/rehabilitation camps popped up, helps up to 250 people in each camp. Community Halls, Wedding Halls, Homestays, Resorts, Lodges, few buildings are  converted as relief camps and accommodate people in different capacity. Individuals, Associations, Organisations are very kind enough to support at this point of time. Youth, Youth Groups, Local associations, NGOs, Government, NSS, NCC, NDRF, Navy and Army are on the job to support in whatever way possible. General public is getting live update through news channels, WhatsApp, Facebook and other social media which is helping to identify the need and cater to the demand. Lots of people are donating money expecting the items to be bought by representatives. All is well. 

Lot of ready-to-eat food items reached district head-quarters and it is partially supplied to needy as the connectivity is lost between district centre and taluks. More than 300 trucks supplied items on a single day (Sunday – 19thAugust)  to Kodagu. Lot of volunteers are involved in rescue operation, there is a scarcity of volunteers in relief camps.

All the kind / donations / monies have limited scope for few days; until people shift from relief centres to their places. Everyone thinks the kind has reached the needy. The needs keep changing w.r.t situation. Ready-to-eat food, Groceries, Medicine, Clothes, Candles and Matchboxes, Help-Kit, Washroom items, Personal hygiene items, etc., Once the need is served or need is changed additional supplies go waste / unused. 

Few needs go un-identified or completely ignored. One best example is counsellors / psychiatrists. People in relief camps needs some ears to hear them, to share their grief, to support them while they are in relief camps. Counsellors need not be professional, but their presence makes a lot of difference. 

Real question comes after people leave the relief centres. Many people would have lost their houses, agricultural lands, plantations, etc., Amenities like schools, colleges, library, offices would have damaged to great extent. How soon people can reconstruct these things ? Answer depends on the potential remaining. For a family having only one house - rebuilding takes entire life. For a family who had 2 story building it takes few days/weeks to get back to normal. Actual help is needed at this point of time. 

Can people wait till that time instead of just sending materials to impacted areas !?

Wednesday, August 15, 2018

ಸ್ವಾತಂತ್ರ್ಯವೇ ಕರಿನಾಗ !?

ಸ್ವಾತಂತ್ರ್ಯ ಭಾರತದಲ್ಲಿ ೭೧ ವಸಂತಗಳನ್ನು ಕಳೆದ ಜನತೆಗೆ ೭೨ನೇ ಸ್ವತಂತ್ರ ದಿನದ ಶುಭಾಶಯಗಳು. ಇಂದು ನಾಗರ ಪಂಚಮಿ ಹಬ್ಬವೂ ಇರುವುದರಿಂದ ಶೀರ್ಷಿಕೆ ಸ್ವಲ್ಪ ಬದಲಾಗಿದೆ, ಎಂದಿನಂತೆ. 

ಬ್ರಿಟಿಷರಿಂದ ಮಾತ್ರ ಸಿಕ್ಕ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಎಂಬ ಸಂದೇಶ ಕೆಲವು ಬಂಧುಮಿತ್ರರಿಂದ ಬಂದು ಇನ್ನೂ ಯಾವುದರಿಂದ ಸ್ವಾತಂತ್ರ್ಯ ಬೇಕು / ಬರಬೇಕು ಎಂಬ ಚಿಂತನೆ ತಂದೊಡ್ಡಿತು. ಸ್ವಾತಂತ್ರ್ಯಪೂರ್ವ ಭಾರತದ ಅರಿವಿದ್ದರೆ ಅಲ್ಲವೇ ಸ್ವತಂತ್ರ್ಯದ ಅರ್ಥ ಸರಿಯಾಗಿ ಆಗುವುದು !? ನಾವು ಕಲಿಸುತ್ತಿರುವುದು / ಕಲಿತಿರುವುದು / ಕಲಿಯುವುದೂ ಕೆಲವು ವಾದಗಳಿಂದ ಮಾರ್ಪಾಡಿಗೆ ಒಳಗಾದ ಇತಿಹಾಸ. ನಮಗೆ ಗೊತ್ತಿರುವ ಇತಿಹಾಸದಲ್ಲಿ ಮಹಾತ್ಮಗಾಂಧಿ, ಅಂಬೇಡ್ಕರ್, ನೆಹರು ಮತ್ತು ಅವರ ವಂಶಾವಳಿಗೆ ಮಾತ್ರ ಮಹತ್ವ. ಉಳಿದವರೆಲ್ಲಾ ತೆರೆಯ ಮರೆಗೆ - ನೇತಾಜಿ, ಚಂದ್ರಶೇಖರ್ ಆಜಾದ್, ಬಿಪಿನ್ ಚಂದ್ರಪಾಲ್, ಲಾಲ್ ಬಹದ್ದೂರ ಶಾಸ್ತ್ರಿ, ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.  ಮುಸ್ಲಿಂ ರಾಜರೆಲ್ಲಾ ವೀರರೇ - ಧರ್ಮಾತೀತ ರಾಜ್ಯಾಡಳಿತ ನಡೆಸಿದವರೇ ಆಗಿರುತ್ತಾರೆ. ಅವರು ಆಳ್ವಿಕೆ ನಡೆಸುತ್ತಿರುವುದು ಹಿಂದೂ ದೇಶ; ಮುಖ್ಯವಾದ ಹುದ್ದೆಗಳೆಲ್ಲಾ ಅವರ ಧರ್ಮದವರಿಗೆ. ಮತಾಂತರಕ್ಕೆ ಅವರು ಯಾವತ್ತೂ ಸಿದ್ಧ, ಆದರೂ ಅವರ ಆಡಳಿತ ಸರ್ವಧರ್ಮವನ್ನೂ ಸಮನಾಗಿ ಕಾಣುತ್ತಿದ್ದರೆಂದೇ ಚಿತ್ರಿತವಾಗಿರುತ್ತದೆ. ಈ ಕಾರಣದಿಂದಲೇ ಟಿಪ್ಪು ಸಹ ಸ್ವತಂತ್ರ್ಯ ವೀರನಂತೆ ಕಾಣುತ್ತಾನೆ. 

ಇತಿಹಾಸವೆಂದರೆ ಕೇವಲ ನಾಯಕರದ್ದು ಮಾತ್ರವೇ? ಜನಸಾಮಾನ್ಯರ ಪಾತ್ರಕ್ಕೆ ಬೆಲೆ ಇಲ್ಲವೇ ? ಇತಿಹಾಸವನ್ನು ಮರುಸೃಷ್ಟಿ ಮಾಡುವ ಬಗ್ಗೆ ಒಂದು ಪ್ರಯತ್ನ ರಷ್ಯಾದಲ್ಲಿ ಆಗಿತ್ತು. ಇದರಲ್ಲಿ ಅಂದಿನ ನಾಯಕರೆಲ್ಲಾ ಮೊಬೈಲ್ ಉಪಯೋಗಿಸುತ್ತಿದ್ದರೆ, ಜನಸಾಮಾನ್ಯರೂ ಅವರೊಂದಿಗೆ ಸಮೂಹ ಮಾಧ್ಯಮಗಳ ಮೂಲಕ ಸಂಪರ್ಕದಲ್ಲಿದ್ದಿದ್ದರೆ ಏನಾಗುತ್ತಿತ್ತು ಎಂಬ ಬಗ್ಗೆ ಒಳ್ಳೆಯ TED ವೀಡಿಯೋ ಇಲ್ಲಿದೆ.

ಜನಮಾನಸದಲ್ಲಿ ಸ್ವಾತಂತ್ರ್ಯದ ವ್ಯಾಖ್ಯೆ ಬದಲಾಗಿರುವುದನ್ನು ಗಮನಿಸಬಹುದು. 
ಯುವಪೀಳಿಗೆಃ
ಹತ್ತನೇ ತರಗತಿಗೂ ಮುನ್ನ ಮೊಬೈಲ್ ಬೇಕು. ಎಲ್ಲಾ ಸೋಶಿಯಲ್ ಮೀಡಿಯಾದಲ್ಲೇ ಹಾಕ್ತೀವಿ - ಜನ್ಮದಿನವಾದರೂ ಸರಿ, ಶ್ರಾದ್ಧವಾದರೂ ಸರಿ. ಎಲ್ಲರೂ ಏನು ಮಾಡುತ್ತಾರೋ ಅದನ್ನೇ ನಾವು ಮಾಡಬೇಕು, ಅದಕ್ಕೆ ಪೋಷಕರ ಅನುಮತಿ ಬೇಕು.  ಅನುಮತಿ ಇಲ್ಲವಾದರೆ ಸ್ವಾತಂತ್ರ್ಯವಿಲ್ಲ ಎಂದರ್ಥ ಅಷ್ಟೇ. ಸುಲಭದ ಉತ್ತರ.
ಮಧ್ಯವಯಸ್ಕರುಃ 
ಮಕ್ಕಳು ಉದ್ಯೋಗ ಸಿಗೋವರೆಗೂ ಓದುತ್ತಲೇ ಇರಬೇಕು. ನಾವು ಹೇಳಿದಂತೆಯೇ ಕೇಳಬೇಕು. ನಾವು ಹೇಳಿದ್ದೇ ಓದಬೇಕು. ೯೫+ ಸ್ಕೋರ್ ಮಾಡಲೇಬೇಕು; ಇಲ್ಲವೆಂದರೆ ಪ್ರತಿಷ್ಟೆಯ ಪ್ರಶ್ನೆ. ಅದಕ್ಕಾಗಿ ಏನು ಬೇಕಾದರೂ ಕೊಡಿಸ್ತೀವಿ. ಈಗೀಗ ಚಿಕ್ಕ ಮಕ್ಕಳು ಊಟ ಮಾಡೋಕೂ ಲಂಚ ! ಅನ್ನ ತಿನ್ನಬೇಕೆಂದರೆ ತಿಂದಾದ ಮೇಲೆ ಚಾಕೋಲೇಟ್ ಗ್ಯಾರಂಟಿ ಇರಬೇಕು.
ಹಿರಿಜೀವಗಳುಃ
ನಮ್ಮ ಕಾಲದಲ್ಲಿ ಹಿಂಗಿರಲಿಲ್ಲಪ್ಪ. ಈಗಿನವರು ನಾವು ಹೇಳಿದ ಮಾತೇ ಕೇಳೋಲ್ಲ. ಈಗಿನ ಮಕ್ಕಳು ಅವರ ಹಿಡಿತದಲ್ಲಿದ್ದಾಗ ಏನು ಹೇಳಬೇಕೋ ಅದನ್ನು ಹೇಳಿರಲೇ ಇಲ್ಲ. ಈಗ ಹಳಹಳಿ. ಪಾಪ, ಅವರೇ ಮರೆತುಬಿಟ್ಟಿದ್ದಾರೆ. 

ಈ ಮೂರೂ ಪೀಳಿಗೆಯ ಜನ ಒಪ್ಪಬಹುದಾದ ಮಾನದಂಡಗಳೇ ಸ್ವಾತಂತ್ರ್ಯದ ಲಕ್ಷಣಗಳು. ಅವುಗಳ ಗೆರೆ ದಾಟಿದರೆ ಸ್ವೇಚ್ಚೆ. ಈಗ ಹೇಳಿ, ಸ್ವಾತಂತ್ರವೆಂದರೆ ಏನು ? ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸುವುದು /ಎಲ್ಲರೂ ಒಪ್ಪಬಲ್ಲ ವಿಧಿವಿಧಾನಗಳು ರೂಪಿಸುವುದು ಹಾವಿನೊಂದಿಗೆ ಸರಸವೇ. 
ಅಬ್ಬಾ.. ನನ್ನ ಶೀರ್ಷಿಕೆಗೆ ಸರಿಯಾದ ಅರ್ಥಬಂತು

ಎಲ್ಲರೂ ಒಪ್ಪಬಲ್ಲ / ಬಯಸುವ ಕೆಲವು ಸ್ವಾತಂತ್ರ್ಯಗಳು ನಮಗೆಲ್ಲಾ ಗೊತ್ತಿದೆ.
ಬದುಕುವ ಸ್ವಾತಂತ್ರ್ಯ -  ಯಾವ ವಿಷಯಗಳೂ ಮೂಲಭೂತ ಹಕ್ಕು / ಕರ್ತವ್ಯಗಳಿಗೆ ತೊಂದರೆ ಕೊಡಬಾರದು
ಧಾರ್ಮಿಕ ಸ್ವಾತಂತ್ರ್ಯ - ಇದು ಸೂಕ್ಷ್ಮ ವಿಷಯ. ಈ ಸ್ವಾತಂತ್ರ್ಯ ಕೊಟ್ಟಿದ್ದರ ಪರಿಣಾಮವೇ ಮತಾಂತರ / ಧರ್ಮಾಂತರಗಳಿಗೆ ಮೂಲ. ಆದರೂ ಇದು ಇರಬೇಕು.
ವಾಕ್ ಸ್ವಾತಂತ್ರ್ಯ - ಬೇಕೆಂದಾಗ walk ಹೋಗೋದಲ್ಲ,  ಅನಿಸಿಕೆಗಳನ್ನು ಸ್ಪಷ್ಟವಾಗಿ ಪ್ರಚುರಪಡಿಸುವ ಸ್ವಾತಂತ್ರ್ಯ

ನನ್ನ ಪ್ರಕಾರ ಸ್ವಾತಂತ್ರ್ಯ ಎಂದರೆ
ಸ್ವಂತಿಕೆ / ತನ್ನತನ ಈ ಪದಗಳೆಲ್ಲಾ ಡಿಕ್ಷನರಿಯಲ್ಲೇ ಉಳಿದುಬಿಟ್ಟಿವೆ. ಸ್ವಾತಂತ್ರ್ಯ - ಸ್ವೇಚ್ಚೆ , ಸಾಧ್ಯ - ಅಸಾಧ್ಯ, ಒಳ್ಳೆಯದು - ಕೆಟ್ಟದ್ದು , ಸರಿ - ತಪ್ಪು ಎಲ್ಲವನ್ನೂ ಬೆರ್ಪಡಿಸುವ ಸಣ್ಣ ಗೆರೆಯೇ ವಿವೇಚನೆ. ಪ್ರತೀ ವ್ಯಕ್ತಿಯೂ ತನ್ನ ವ್ಯಕ್ತಿತ್ವವನ್ನು / ಜೀವನವನ್ನು ರೂಪಿಸಿಕೊಳ್ಳಲು ಬೇಕಾದ ನಿರ್ದಾರಗಳನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ವಿವೇಚನಾಪೂರ್ವಕವಾಗಿ ತೆಗೆದುಕೊಳ್ಳಬೇಕು. ಸಮಾಲೋಚನೆ ಮಾಡಬಹುದು, ಆದರೆ ಆ ನಿರ್ಧಾರಗಳ ಬದ್ಧತೆ ಅವರಿಗೇ ಬಿಟ್ಟಿದ್ದು.

ಸ್ವಾತಂತ್ರ್ಯ ದಿನದ ಶುಭಾಶಯಗಳು. ಸ್ವಾತಂತ್ರ್ಯದಿನವೆಂದರೆ ರಜಾದಿನ ಅಷ್ಟೇ ಅಲ್ಲ !
ಒಂದು ವರ್ಷದ ನಂತರ ಬ್ಲಾಗಲ್ಲಿ ಗೀಚುತ್ತಿದ್ದೇನೆ. ಸದ್ಯಕ್ಕೆ ಇಷ್ಟು ಸಾಕು.

ಒಂದೆರಡು ಒಳ್ಳೆಯ ವೀಡಿಯೋಗಳೊಂದಿಗೆ,
ಧನ್ಯವಾದಗಳು

1. ನವಭಾರತದ ನಿರ್ಮಾತೃಗಳು - ನಾವು ಮರೆತ ಮುಖಗಳು 
2. ರಸ್ತೆಗಳು ಅಪ್ಪನ ಆಸ್ತಿಯಲ್ಲ - ಅಕ್ಷಯ್ ಕುಮಾರ್ ಬರಬೇಕು ನಮಗೆ ಇವೆಲ್ಲಾ ಹೇಳೋಕೆ
3. ೧೬ ದೇಶಭಕ್ತಿ ಗೀತೆಗಳು - ಸಣ್ಣ ರೀಮಿಕ್ಸ್

Tuesday, October 31, 2017

ಸವಿ ಕನ್ನಡ - ಸಹಿ ಕನ್ನಡ

ಕನ್ನಡಿಗರು ಹಾಲಿನಂಥ ಜನ. ಯಾವ ಪಾತ್ರೆಗೆ ಹಾಕಿದರೆ ಆ ಪಾತ್ರೆಯಂತೆ ಕಾಣುವಂತೆಯೇ ಕನ್ನಡಿಗರೂ ಸಹ. ತಮಿಳುನಾಡಿಗೆ ಹೋದರೆ ತಮಿಳು, ಆಂಧ್ರಕ್ಕೆ ಹೋದರೆ ತೆಲುಗು, ಕರ್ನಾಟಕ ಶಿರ ದಾಟಿದರೆ ಹಿಂದಿ ಮಾತನಾಡಿಕೊಂಡು ಎಲ್ಲರೊಳಗೊಂದಾಗುವ ಮಂಕುತಿಮ್ಮರು.  ಮಾತೃಭಾಷೆಯಾಗಿ ಮಾತ್ರ ಮಹಾ/ನಗರ/ಪಟ್ಟಣಗಳಲ್ಲಿ ಉಳಿದಿರುವ ಕನ್ನಡ ಮನದ ಭಾಷೆಯಾಗಿ ಉಳಿಯುತ್ತದೆಯೇ ಎಂಬುದು ಪ್ರಶ್ನೆ. ಕರ್ನಾಟಕ ಹೇಳಲು ಮಾತ್ರ ಕನ್ನಡಿಗರ ರಾಜ್ಯ, ಮನೆಭಾಷೆಯಾಗಿ / ಮಾತೃಭಾಷೆಯಾಗಿ ಕನ್ನಡ ಬಳಸುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಸುಳ್ಳಲ್ಲ. ಕನ್ನಡ ಮಾಧ್ಯಮ ಅನಾಥ ಕೂಸು; ಸವಲತ್ತುಗಳಿಲ್ಲದ ಶಿಕ್ಷಕರಿಲ್ಲದ ಕನ್ನಡ ಶಾಲೆಗಳು ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಓದಿಸಲು ಕಷ್ಟವಾದವರಿಗೆ ಮಾತ್ರ ಮೀಸಲು. ಸರಿ... ಇದನ್ನು ಸರಿಪಡಿಸಲು ಆಗುತ್ತದೆಯೇ ? ಮನದ ಭಾಷೆಯಾಗಿ ಉಳಿದಾಗ ಮಾತ್ರ ಕನ್ನಡ ಮಾಧ್ಯಮ, ಕನ್ನಡ ಶಾಲೆಗಳು, ಕನ್ನಡ ಪ್ರಜ್ನ್ಯೆ ಉಳಿಯಲು ಸಾಧ್ಯ. 

ಸಹಿ ಎನ್ನುವುದು ನಮ್ಮದೇ ಆದ ಒಂದು ಚಿನ್ಹೆ. ಸುಲಭವಾಗಿ ನಕಲಿಸಬಹುದಾದರೆ ಅದು ಮತ್ತಷ್ಟು ತೊಂದರೆಗಳಿಗೆಡೆ ಮಾಡುವುದೂ ಉಂಟು. ಸಾಕ್ಷರರೆಲ್ಲಾ ಇಂಗ್ಲೀಷ್ನಲ್ಲೇ ಸಹಿ ಮಾಡುವುದು ತುಂಬಾ ಸಾಮಾನ್ಯ. ಈ ಸಹಿಗೆ ರಾಜ್ಯ, ಭಾಷೆಯ ಗಡಿಗಳಿಲ್ಲ, ಆ ಮಟ್ಟಿಗೆ ಅದು ಜಾಗತಿಕ.  ನಮ್ಮ ಮನೆಯಲ್ಲೇ ಯಾರೂ ಕನ್ನಡದಲ್ಲಿ ಸಹಿ ಮಾಡುವವರಿಲ್ಲ; ನನ್ನನ್ನು ಹೊರತುಪಡಿಸಿ.ಅಪ್ಪ ಅಣ್ಣ ಅಕ್ಕ ತಂಗಿ ಮಕ್ಕಳು ಯಾರದೂ ಕನ್ನಡದಲ್ಲಿ ಸಹಿ ಇಲ್ಲ, ಎಲ್ಲರೂ ಕನ್ನಡಿಗರೇ. ಅಮ್ಮ ಕನ್ನಡದಲ್ಲಿ ನಕಲಿಸಲು ಅಸಾದ್ಯವಾದ ಸಹಿ ಮಾಡುತ್ತಿದ್ದರು. 

ನಾನು ೨೦೦೭ರಿಂದ ಸಹಿಯನ್ನು ಕನ್ನಡದಲ್ಲೇ ಮಾಡುತ್ತಿದ್ದೇನೆ. ಕೆಲವು ಸಮಸ್ಯೆಗಳನ್ನೂ ಸಲಹುತ್ತಿದ್ದೇನೆ. ಪ್ಯಾನ್ ಕಾರ್ಡ್ ಮಾಡಿಸುವಾಗ ೨೦೦೪ರಲ್ಲಿ ಇಂಗ್ಲೀಷ್ನಲ್ಲಿ ಸಹಿ ಮಾಡಿದ್ದೆ. ಯಾವುದೇ ಬ್ಯಾಂಕ್/ದುಡ್ಡು ಕಾಸಿನ ವಿಚಾರಕ್ಕೆ ಬಂದಾಗ ಎಲ್ಲರೂ ಆ ಸಹಿಯೇ ಬೇಕು ಎಂದು ಕೇಳುತ್ತಾರೆ. ಒಂದು ದೃಡೀಕರಣ ಪತ್ರ (Declaration Form) ಕೊಟ್ಟರೆ ಆ ಸಮಸ್ಯೆ ಮುಗಿಯುತ್ತದೆ. ಪ್ಯಾನ್ ಕಾರ್ಡ್ ಬರೀ ಭಾರತಕ್ಕೆ. ವಿಶ್ವಪರ್ಯಟನೆಗೆ ಬೇಕಾದ ಪಾಸ್'ಪೋರ್ಟ್ ಸಹಿ ಕನ್ನಡದಲ್ಲಿದೆ. ಪ್ಯಾನ್ ಕಾರ್ಡ್ ಜೊತೆ ಪಾಸ್ ಪೋರ್ಟ್ ಕೊಟ್ಟರೆ ಆ ದೃಡೀಕರಣವೂ ಬೇಕಿಲ್ಲ.

ये सही है !! ಕನ್ನಡಿಗರೆಲ್ಲಾ ಕನ್ನಡದಲ್ಲಿ ಸಹಿ ಮಾಡಬಹುದಲ್ಲವೇ ? ಚತುಷ್ಕೋಟಿ ಕನ್ನಡಿಗರಲ್ಲಿ ಎಷ್ಟು ಜನ ಕನ್ನಡದಲ್ಲಿ ಸಹಿ ಮಾಡುತ್ತಾರೆ ?  ಕನ್ನಡಿಗರು ಎಂದು ತೋರಿಸಿಕೊಳ್ಳುವುದು ಹೇಗೆ ? ತೋರ್ಪಡಿಕೆಯ ಅವಶ್ಯಕತೆಯ ಬಗ್ಗೆ ಹೇಳುತ್ತಿಲ್ಲ, ಅವಕಾಶ ಸಿಕ್ಕಾಗ ಬಳಸಿಕೊಳ್ಳುವುದು ತಪ್ಪಲ್ಲ ಅಲ್ಲವೇ?  ಸಹಿಯೊಂದಿಗೆ ಪ್ರಾರಂಭವಾಗಲಿ ಈ ನಡೆ, ನಡೆಯಲಿ ಕನ್ನಡ ನುಡಿ ಜಾತ್ರೆ.  

ಕನ್ನಡ ಹಬ್ಬದ ಶುಭಾಶಯಗಳು

Summary in English: 
Kannada is regional language of Karnataka state, that has population of over 60 million. People who can read write Kannada / whose mother tongue is Kannada, their signature will be in English. Better to start signing in their mother tongue.

Friday, July 29, 2016

ಬೇಕಿದೆ - ಸಮಗ್ರ ಕರ್ನಾಟಕದ ಅರಿವು

ರಾಜಕೀಯ ಹಿತಾಸಕ್ತಿಗಳನ್ನು ಮರೆತು ಹೋರಾಡುವ ರಾಜಕಾರಣಿಗಳು ನಮಗೆ ಸಿಗುವುದಿಲ್ಲ. ನಮ್ಮ ಸಮಸ್ಯೆಗೆ ಮನಃಪೂರ್ವಕವಾಗಿ ವಾದ ಮಂಡಿಸುವವರೂ ನಮ್ಮಲ್ಲಿಲ್ಲ. ಜನರ ಸಮಸ್ಯೆಗಳಿಗೆ ಜನರೇ ಒಂದಾಗಿ ಹೋರಾಡಬೇಕಾದ ಅನಿವಾರ್ಯತೆ ನಮಗಿದೆ. ಸಮಗ್ರ ಕರ್ನಾಟಕ ಎಂಬುದೇ ನಾವು ಮರೆಯುತ್ತಿದ್ದೇವೆ. ಮಹದಾಯಿ ಎಂದರೆ ಉತ್ತರ ಕರ್ನಾಟಕ ಸಮಸ್ಯೆ, ಕಾವೇರಿ ಎಂದರೆ ದಕ್ಷಿಣ ಕರ್ನಾಟಕದ್ದು, ಅರ್ಕಾವತಿ ಬಗ್ಗೆ ಮಾತಾಡಿದರೆ ಬೆಂಗಳೂರು / ಗ್ರಾಮಾಂತರ / ರಾಮನಗರ ಜಿಲ್ಲೆಗಳದ್ದು ಎಂಬ ಮನಸ್ಥಿತಿ ಇರುವವರೆಗೂ ಗೆಲುವು ನಮ್ಮದಲ್ಲ.

--------------------------------------------------------------------------------------------------------------------------

ವಿಶ್ವವಾಣಿ ಲೇಖನ - ಪ್ರತಾಪ್ ಸಿಂಹ - ಸಂಸದರು


----- ------ -------
ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ನಮ್ಮ ವಿರುದ್ಧವಾಗಿದೆ..!? ಕರ್ನಾಟಕ ನೆಲ, ಜಲ, ನದಿ, ವನಗಳ ಬಗ್ಗೆ ಕಾಳಜಿ ಇಟ್ಟುಕೊಂಡ ಒಬ್ಬ ವಕೀಲನಾಗಿ ನನಗನಿಸಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳುತಿದ್ದೇನೆ.
ಕಾವೇರಿ ನ್ಯಾಯಾಧಿಕರಣವಾಗಲಿ, ಮಹದಾಯಿ ನ್ಯಾಯಾಧಿಕರಣವಾಗಲಿ ಅಥವ ಸುಪ್ರೀಂ ಕೋರ್ಟ್ ಅಥವ ಯಾವುದೇ ಹೈಕೋರ್ಟುಗಳಲ್ಲಿ ಸಹಜವಾಗಿ ಸದಾ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ಯಾಕೆ ತೀರ್ಪು ಬರುತ್ತೆ? ಎನ್ನುವುದನ್ನು ಪರಾಮರ್ಶಿಸಿ ನೋಡಿ.. ನಿಮಗೆ ಸತ್ಯ ದರ್ಶನವಾಗುತ್ತದೆ.
ಕಾವೇರಿ ವಿಷಯ ತೆಗೆದುಕೊಳ್ಳಿ ಎಂದಾದರೂ ನಮ್ಮ ವಕೀಲರು ಸಮರ್ಪಕವಾಗಿ ವಾದ ಮಂಡಿಸಿದ್ದಾರೆಯೆ..? ನ್ಯಾಯಾಲಯ ಕೇಳಿದ ದಾಖಲೆಗಳನ್ನು ನೀಡಿದ್ದಾರೆಯೆ? ಪ್ರತಿ ಸರ್ಕಾರ ಬಂದಾಗಲೂ ವಕೀಲರು ಬದಲಾಗುತಿರುತ್ತಾರೆ.. ನಮ್ಮ ಪರ ವಾದ ಮಾಡುವವರು ಸದಾ ಕರ್ನಾಟಕದವರಲ್ಲದ ವಕೀಲರೆ..!? ತಮಿಳುನಾಡಿನ ಪರ ಸದಾ ಪರಾಷರನ್ ಎಂಬ ಹಿರಿಯ ಮುತ್ಸದ್ದಿಯೇ ವಾದಿಸುತ್ತಾರೆ. ಯಾವುದೇ ಸರ್ಕಾರವಿದ್ದರೂ ಕಾವೇರಿ ವಿಷಯ ಬಂದಾಗ ಇವರೇ ಶಾಶ್ವತ ವಕೀಲರು! ರಾಜ್ಯದ ಹಿತಾಸಕ್ತಿ ಬಂದಾಗ ಪರಾಷರನ್ ತಮ್ಮ ರಾಜ್ಯಕ್ಕಾಗಿ ಕಾಳಜಿಯಿಂದ ವಾದಿಸಿದರೆ ನಮ್ಮ ಹೊರರಾಜ್ಯ ವಕೀಲರು ಕೇವಲ ದುಡ್ಡಿಗಾಗಿ ವಾದಿಸುತ್ತಾರೆ!! ತಮಿಳುನಾಡಿನ ಅಧಿಕಾರಿಗಳು ಎಲ್ಲಾ ದಾಖಲಾತಿಗಳನ್ನು ವ್ಯವಸ್ಥಿತವಾಗಿ ತಮ್ಮ ವಕೀಲರಿಗೆ ಒದಗಿಸಿದರೆ ನಮ್ಮವರು ಕಾಟಾಚಾರಕ್ಕೆ ಬಂದವರಂತಿರುತ್ತಾರೆ! ನಮ್ಮ ವಕೀಲರು ಆಗಾಗ ಬದಲಾಗುವುದರಿಂದ ಸಮಸ್ಯೆಯ ಆಳ ಅವರ ಅರಿವಿಗೆ ಪರಿಚಯವಾಗಿರುವುದೇ ಇಲ್ಲ. ಈ ಎಲ್ಲದರಿಂದಾಗಿ ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸಲಾರದೆ, ದಾಖಲಾತಿಗಳನ್ನು ಒದಗಿಸಲಾರದೆ ಹಿಮ್ಮೆಟ್ಟುತಿದ್ದೇವೆ. ಈ ಸತ್ಯ ಅರಿಯದ ನಾವು ನ್ಯಾಯಾದಿಕರಣಗಳನ್ನು ದೂರುತ್ತೇವೆ.
ಈಗಿನ ಮಹದಾಯಿ ಮಧ್ಯಂತರ ತೀರ್ಪನ್ನೇ ನೋಡಿ.. ನ್ಯಾಯಾಧಿಕರಣಗಳು ಪಟ್ಟಿ ಮಾಡಿರುವ ನಮ್ಮ ದೌರ್ಬಲ್ಯಗಳನ್ನು ಗಮನಿಸಿ..
೧. ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಯೋಜನಾ ವರದಿ ಹಾಗೂ ತಾಂತ್ರಿಕ ಸಾದ್ಯಾಸಾದ್ಯತಾ ವರದಿಯನ್ನು ನ್ಯಾಯಾದಿಕರಣಕ್ಕೆ ಸಲ್ಲಿಸಿಲ್ಲ.
೨. ಪರಿಸರ ಇಲಾಖೆಯ ಅನುಮೋದನೆಯನ್ನೇ ಪಡೆಯದೆ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಆಕ್ಷೇಪಾರ್ಹ.
೩. ನೀರು ಪಡೆಯುವ ಸಂದರ್ಭದಲ್ಲಿ ಬರಗಾಲ ಇದೆ ಎನ್ನುವುದನ್ನು ಕರ್ನಾಟಕ ಹೇಗೆ ಸಾಬೀತುಪಡಿಸುತ್ತದೆ? ಮಳೆಯನ್ನು ಆಧರಿಸಿಯೋ ಅಥವಾ ಡ್ಯಾಂನಲ್ಲಿ ನೀರಿನ ಪ್ರಮಾಣವನ್ನು ಗಮನಿಸಿಯೋ ಎನ್ನುವುದು ಸ್ಪಷ್ಟವಾಗಿಲ್ಲ.
೪. ಹೆಚ್ಚುವರಿ ನೀರಿನ ಲಭ್ಯತೆ ಇದೆ ಎನ್ನುವುದನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷಾಧಾರಗಳನ್ನು ಒದಗಿಸಿಲ್ಲ.
೫. ತಿರುವು ಯೋಜನೆಯ ಸಾಧಕ-ಬಾದಕಗಳ ಕುರಿತು ವೈಙ್ನಾನಿಕ ಅಧ್ಯಯನ ನಡೆಸಿಲ್ಲ. 
ಈಗ ಹೇಳಿ ನ್ಯಾಯಾಧಿಕರಣದ ತೀರ್ಪು ಯಾವ ಕಾರಣದಿಂದಾಗಿ ನಮ್ಮ ವಿರುದ್ದವಾಯಿತು..? ಇದಕ್ಕೆ ನೇರ ಹೊಣೆ ಸರ್ಕಾರ ಮತ್ತು ನಮ್ಮ ಕಾನೂನು ಪಂಡಿತರಲ್ಲವೆ..?
ರಾಜ್ಯವೊಂದಕ್ಕೆ ತನ್ನ ನೆಲ,ಜಲ,ನದಿ,ಕಾನನಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಕನಿಷ್ಟ ಕಾಳಜಿ, ಅವನ್ನು ನಾಡಗಾಗಿ ಉಳಿಸಬೇಕಾದ ಇಚ್ಛಾಶಕ್ತಿಗಳಿಲ್ಲದಿದ್ದರೆ ಜನನಾಡಿಗೆ ಇಂತಹ ಕಷ್ಟ ತಪ್ಪಿದ್ದಲ್ಲ. ಅದು ಯಾವುದೇ ಪಕ್ಷದ ಸರ್ಕಾರವಾಗಿರಲಿ.. ಎಲ್ಲರಿಗೂ ಅನ್ವಯಿಸುತ್ತೆ.. ಇದು ನಮ್ಮ ನಾಚಿಕೆಗೇಡು..
-ಸಿ.ಎಸ್.ದ್ವಾರಕಾನಾಥ್, ವಕೀಲರು (ಕನ್ನಡಪ್ರಭ ಲೇಖನ)


Thursday, April 7, 2016

ದುರ್ಮುಖಿ ಸಂವತ್ಸರದ ಆರಂಭ

ಎಲ್ಲರಿಗೂ ದುರ್ಮುಖಿ ಸಂವತ್ಸರದ ಶುಭಾಶಯಗಳು.
ದುರ್ಮುಖಿ - ಹೆಸರೇ ಭಯಂಕರವಾಗಿದೆ; ಸ್ವಲ್ಪ ಲಘುಹಾಸ್ಯದಿಂದಲೇ ಪ್ರಾರಂಭಿಸೋಣ. ಇಂಗ್ಲಿಷ್ ಕ್ಯಾಲೆಂಡರಿಗೆ ಒಗ್ಗಿರುವ ನಮಗೆ ೨೦೧೬ ಚೆನ್ನಾಗಿ ಕೇಳಿಸುತ್ತೆ, ೨೦೧೫-೧೬ರ ಆರ್ಥಿಕ ವರ್ಷ ಈಗ ತಾನೇ ಮುಗಿದ ಸಂದರ್ಭದಲ್ಲೇ ನಮ್ಮ ಹಿಂದೂ ಸಂವತ್ಸರವೂ ಕಾಲಿಡುತ್ತಿದೆ. ಯಾವಾಗಲೂ ಹೀಗೇ ಬಿಡಿ. ಕೆಲವು ಸಲ ಇಂಗ್ಲೀಷ್ ಕ್ಯಾಲೆಂಡರ ಮುಂದಿದ್ದರೆ ಕೆಲವು ಸಲ ಹಿಂದು ಸಂವತ್ಸರ. ನಾವು ಯಾಕೆ ಸಂಖ್ಯಾ ವರ್ಷ ಬಿಟ್ಟು ಹೆಸರುಗಳಿರುವ ಸಂವತ್ಸರ ಬಳಸುತ್ತಿದ್ದೇವೆ ? ಯಾರಿಗಾದರೂ ಈ ಪ್ರಶ್ನೆ ಕಾಡಿದ್ದರೆ ಇಲ್ಲಿದೆ ಉತ್ತರ ತಕ್ಕ ಮಟ್ಟಿಗೆ; ನಂಬುವುದೂ ಬಿಡುವುದೂ ನಿಮಗೇ ಬಿಟ್ಟಿದ್ದು. ಪ್ರತೀ ವರ್ಷಕ್ಕೂ ಅದರದೇ ಆದ ಪ್ರಭಾವ ಇರುತ್ತದಂತೆ, ಸಂಖ್ಯಾಶಾಸ್ತ್ರ ಪಂಡಿತರೂ ಇದೇ ತತ್ತ್ವ ಪಾಲಿಸುತ್ತಾರೆ ಅಲ್ಲವೇ. ೨೦೧೬ = ೨ + ೦ + ೧ + ೬ = ೯... ಒಂಭತ್ತು... ಒಂಭತ್ತು ಒಂಭತ್ತು ಒಂಭತ್ತು ತೋಳ ಹಳ್ಳಕ್ಕೆ ಬಿತ್ತು.  
ಸಂವತ್ಸರ ಎಂದರೆ ಏನು, ಅದರ ಹಿನ್ನೆಲೆ ಏನು ಅನ್ನೋದಕ್ಕೆ ಈ ಪುಟ ಒಮ್ಮೆ ನೋಡಿ. ಸಂವತ್ಸರದ ಪಟ್ಟಿ ಬೇಕಾದರೆ ನಮ್ಮ ವಿಕಿ ಹೇಳ್ತಾನೆ, ಓದಿಕೊಳ್ಳಿ

ಸಂವತ್ಸರಗಳ ನಾಮಜಪ ಬಿಟ್ಟು ಮುಂದೆ ಬರೋಣ.
ಈಗ ತಾನೇ ವರ್ಷಾಂತ್ಯದ ಬೇಯುವಿಕೆಯಲ್ಲಿ ಅಥವಾ ಮಕ್ಕಳ ಪರೀಕ್ಷೆ ಬಿಸಿಯಲ್ಲಿ ಬೆಂದಿದ್ದೀವಿ, ತಲೆಗೆ ಎಣ್ಣೆ ಹಚ್ಚಿಕೊಂಡು ಹಂಡೆ ಬಿಸಿ ನೀರಿನಲ್ಲಿ ಮಂಡೆ ಬಿಸಿ ಮಾಡಿಕೊಳ್ಳಿ. ಮಾವಿನ ತೋರಣ ಕಟ್ಟಿದ್ದೀರೆಂದು ನಂಬಿದ್ದೇವೆ. ಆಮೇಲೆ ಈ ವರ್ಷವನ್ನೂ ಕಳೆದ ವರ್ಷಗಳಂತೆಯೇ ಬಂದಂತೆ ಸ್ವೀಕರಿಸುತ್ತೇವೆ ಎಂದು ಹೇಳಿಕೊಂಡು ಬೇವು ಬೆಲ್ಲ ತಿನ್ನಿ. ಬೇವಿನ ಹೂ, ಎಲೆಗಳನ್ನು ಬಿಸಾಡಿ ಬರೀ ಬೆಲ್ಲ ತಿಂದು ಸುಖವನ್ನೇ ಬಯಸಿದರೆ ನಾವು ಜವಾಬ್ದಾರರಲ್ಲ. ಬಹುಶಃ ಎಲ್ಲರಿಗೂ ರಜೆ ಇದೆ (ನನಗಿಲ್ಲ, ಅದಕ್ಕೆ ಬಹುಶಃ ಎಂದಿದ್ದು), ಮೂರ್ಖರ ಪೆಟ್ಟಿಗೆ / ದೂರದರ್ಶನದ ಪ್ರತೀ ವಾಹಿನಿಯಲ್ಲೂ ನೀವು ಭಯಭೀತರಾಗುವ ಜ್ಯೋತಿಷ್ಯ ಬರುತ್ತದೆ, ಕೇಳಿ ಸ್ವಲ್ಪ ಸೀರಿಯಸ್ ಆಗಿ ತಲೆ ಕೆಡಿಸ್ಕೊಳಿ. ಆ ನಂತರ ಬೇರೆ ಇನ್ನೇನು ಮಾಡೋದು, ಅದೇ ವಾಹಿನಿಯಲ್ಲೇ ಸಂತೆಗಳು / ಜಾತ್ರೆಗಳು / ಯುಗಾದಿ ವಿಶೇಷಗಳು ಅಂತೆಲ್ಲಾ ಯಾವೋ ಕಾರ್ಯಕ್ರಮಗಳು ಬರುತ್ತವೆ. ನೋಡಿ - ಯಾವುದನ್ನೂ ತಲೆಗೆ ಹಚ್ಕೋಬೇಡಿ (ಈಗಾಗಲೇ ಭವಿಷ್ಯದ ಹುಳ ನಿಮ್ಮ ತಲೆಯಲ್ಲಿರುತ್ತದೆ). ಜಾಹೀರಾತು(ಥು)ಗಳ ಮಧ್ಯೆ ಕಾರ್ಯಕ್ರಮ ನೋಡುವಾಗ ಬೇಜಾರೂ ಆಗುವಷ್ಟರಲ್ಲಿ ......... ಊಟದ ಸಮಯ. ನೆಮ್ಮದಿಯಾಗಿ ಊಟ ಮಾಡಿ. ಸಾದ್ಯವಾದರೆ ಊಟದ ನಂತರ ಒಂದು ನಿದ್ದೆ ಮಾಡಿ.

ಯಪ್ಪಾ... ಗೊತ್ತಿರೋದನ್ನೇ ಎಷ್ಟು ಕೊರೀತಿದಿಯೋ ಅಂತಿದ್ದೀರಾ... ಹೊರಟೆ.. ಹೊರಡೋ ಮುಂಚೆ ಇನ್ನೊಂಚೂರು...

ನನಗೆ ಹೊಸ ವರ್ಷ, ಯುಗಾದಿ, ನನ್ನ ಹುಟ್ಟು ಹಬ್ಬ ಎಲ್ಲಾ ರಜ ತೊಗೊಳೋಕ್ಕೆ ಕಾರಣಗಳು ಅಷ್ಟೇ. ಭವಿಷ್ಯವನ್ನು ನೋಡುತ್ತೇನೆ ನಂಬುವುದಿಲ್ಲ. ನಮ್ಮ ಯೋಗ್ಯತೆ ನಮಗೆ ಗೊತ್ತಿರುವಾಗ ಯಾವ ಯೋಗ ನಮಗೆ ಏನು ಮಾಡುತ್ತೆ ಹೇಳಿ ?